ಇದೇ ತಿಂಗಳಲ್ಲಿ `ಲವ್` ಶೋ
Posted date: 10 Thu, Oct 2013 – 09:02:58 AM

ಶ್ರೀಪ್ರಸನ್ನವೆಂಕಟೇಶ್ವರ ಕ್ರಿಯೇಷನ್ಸ್ ಲಾಂಛನದಲ್ಲಿ ಕೆ.ಮೇಘನ ಚೌಧುರಿ ಅರ್ಪಿಸುವ, ಕೆ.ಕಾಶಿವಿಶ್ವೇಶ್ವರರಾವ್ ನಿರ್ಮಿಸಿರುವ ‘ಲವ್ ಶೋ‘ ಚಿತ್ರದ ಪ್ರಥಮಪ್ರತಿ ಸಿದ್ದವಾಗಿದೆ. ಚಿತ್ರ ಇದೇ ತಿಂಗಳಲ್ಲಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.ಆಬುತುಲ ಶ್ರೀನಿವಾಸರಾವ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಬೆಂಗಳೂರು, ಮುರಡೇಶ್ವರ ಮುಂತಾದ ಕಡೆ ನವವತ್ತು ದಿನಗಳ ಚಿತ್ರೀಕರಣ ನಡೆದಿದೆ. ಸಂಕಲನ ಕಾರ್ಯವನ್ನು ನಿರ್ದೇಶಕರೇ ಮಾಡಿದ್ದಾರೆ.
ಆರು ಹಾಡುಗಳಿರುವ ಈ ಚಿತ್ರಕ್ಕೆ ಶ್ರೀಧರ್ ಆತ್ರೇಯ ಸಂಗೀತ ನೀಡಿದ್ದಾರೆ. ಅನಿಲ್ ಪಲ್ಲ ಅವರ ಛಾಯಾಗ್ರಹಣವಿದೆ. ಕಪಿಲ್ ನೃತ್ಯ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಸಂತೋಷ್‌ಕುಮಾರ್, ಶಿಶಿರ, ಮಂಜುನಾಥ್, ರಾಮರಾವ್, ವರ್ಮ, ರಂಗ, ಸಾಧುಕೋಕಿಲ, ಬುಲೆಟ್‌ಪ್ರಕಾಶ್, ತಬಲನಾಣಿ, ಮಂಡ್ಯರಮೇಶ್ ಮುಂತಾದವರಿದ್ದಾರೆ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed